Saturday, August 30, 2008

ಚಂದ್ರನಿಗೊಂದು ರೂಪಕ


ಹುಣ್ಣಿಮೆಯ ಚಂದ್ರನಿಗೊಂದು

ರೂಪಕ ಕೊಡುವುದಾದರೆ


ಮಜ್ಜಿಗೆಯಲ್ಲಿ ತೇಲುವ ಬೆಣ್ಣೆ

ಚಪ್ಪರಿಸಿದ ನಿಂಬೆ ಪೆಪ್ಪರಮಿಂಟು

ಕಪ್ಪು ಕೊಳದ ರಾಜಹಂಸ

ನೀಲಿ ಚಪ್ಪರದ ತೂಗುದೀಪ

ಇತ್ಯಾದಿ


ಅದೆಲ್ಲ ಹಳತಾಯಿತಲ್ಲವಾ

ಒಂದಿಷ್ಟು ಹೊಸತು ಪ್ರಯತ್ನಿಸುವಾ


ಬೀಸಿದ ಕಲ್ಲು ಅಪ್ಪಳಿಸಿ ಚೂರಾದ ಬೀದಿ ದೀಪದ ತುಣುಕು

ಮಲಗಿದವರನ್ನು ಎಬ್ಬಿಸಿ ಥಳಿಸುವಾಗ ಹೆಪ್ಪುಗಟ್ಟಿದ ಕೊನೆಯ ಕೇಕೆ

ಅವಳ ಹಣೆಯಿಂದ ಇವರು ಗೀಚಿ ಅಳಿಸಿದ ಬಿಂದಿ

ಅವರು ಬಾಕು ಬೀಸಿದಾಗ ಬುರುಖಾದಿಂದ ಆಚೆ ಸರಿದ ಇವಳ ಮುಖ

ಕಪ್ಪು ಟಾರು ರೋಡಿನಲ್ಲಿ ಅಂಗೈಯಗಲದ ರಕ್ತದ ಕಲೆ


ರೂಪಕಗಳಿಗೆ ಸಾವಿಲ್ಲ

11 comments:

Anonymous said...

ಚೆಕಾವ್‌ ಪ್ರಭಾವ ದಟ್ಟವಾಗಿದೆ.
-ಭುವಿ

ಸುಧನ್ವಾ ದೇರಾಜೆ. said...

ನನಗೆ ಏನೇನೋ ನಕ್ಷತ್ರ ಹೊಳೀತಿದೆ. ಅವರದ್ದು ಹುಣ್ಣಿಮೆಯ ಚಂದ್ರ ಅಲ್ಲ, ಯಾವಾಗಲೂ ಅರ್ಧಚಂದ್ರ ! ಇನ್ನು ಈ " ಮಂತ್ರಿಗೆ ಅರ್ಧಚಂದ್ರ ' ಅನ್ನೋವಂಥ ಪ್ರಯೋಗ ಹೇಗೆ ಶುರುವಾಯಿತು ? ಚೌತಿ ಚಂದ್ರ ಸದ್ಯವೇ ಕಾಣುತ್ತಾನಾ? ಬಲ್ಲವರು ಉತ್ತರಿಸುವಿರೆ?!

VENU VINOD said...

ಚಂದ್ರನ ಹೊಸ ರೂಪಕಗಳು ಇಷ್ಟವಾದವು

ಆಲಾಪಿನಿ said...

ಹರೀಶ್‌, ತಕ್ಷಣ ಅಂದ್ಕೊಂಡೆ ಭುವಿಯವರು ಹೇಳಿದ್ದನ್ನೇ... ನೈಸ್‌

ಚಿತ್ರಾ ಸಂತೋಷ್ said...

ಚೆನ್ನಾಗಿದೆ ಸರ್....
-ಚಿತ್ರಾ

Chamaraj Savadi said...

ಕವನ ತುಂಬಾ ಚೆನ್ನಾಗಿದೆ ಹರೀಶ್.
ನಿಮ್ಮ ಕವನ ನನಗೆ ಆಲನಹಳ್ಳಿ ಕೃಷ್ಣ ಅವರ ಬೆಳಗು ಕವಿತೆಯನ್ನು ನೆನಪಿಸಿತು.

- ಚಾಮರಾಜ ಸವಡಿ

Anonymous said...

ಎಲ್ಲರಿಗೂ ಥ್ಯಾಂಕ್ಸ್.

ಭುವಿ & ಶ್ರೀದೇವಿ,
ಕವಿತೆಗಳಲ್ಲಿ ಚೆಕಾವ್‌ನನ್ನು ಫಾಲೋ ಮಾಡುವುದು ಬಹುಶಃ ಕಷ್ಟ. ಕತೆಗಳಲ್ಲಷ್ಟೇ ಸಾಧ್ಯ.
ಸುಧನ್ವ,
ತಮ್ಮ ಚಿಂತನೆಯನ್ನು ಮುಂದುವರಿಸೋಣವಾಗಲಿ !
ವೇಣು & ಚಿತ್ರಾ,
ಥ್ಯಾಂಕ್ಸ್
ಚಾಮರಾಜ್,
ಆಲನಹಳ್ಳಿಯವರ ಕವಿತೆಗಳ ಆಳದಲ್ಲಿರುವ ಜೀವಕಾಮ ನನಗೆ ತುಂಬಾ ಇಷ್ಟ.
- ಹರೀಶ್ ಕೇರ

Karnataka Best said...

ಚೆನ್ನಾಗಿದೆ ರೂಪಕ

ಶ್ರೀನಿಧಿ.ಡಿ.ಎಸ್ said...

nice, liked it.

shivu.k said...

ಕವನ ಚೆನ್ನಾಗಿದೆಯಲ್ಲ! ಇನ್ನೊಂದಷ್ಟು ಪ್ರಯೋಗ ಆಗಲಿ!

ಶಿವು.ಕೆ

Anonymous said...

ಹರೀಶ್
ಹೊಸ ರೂಪಕಗಳು ಇಷ್ಟವಾದವು .... ಇಂಥ ರೂಪಕಗಳು ನಿರಂತರ ಕ್ರಿಯಾಶೀಲವಾಗಿರುವ ಮನಸುಗಳಿಗೆ ಮಾತ್ರ ಹೊಳೆಯಲು ಸಾಧ್ಯ.