Sunday, July 12, 2009

ಅವರು ಮೊದಲು ಕಮ್ಯುನಿಸ್ಟರಿಗಾಗಿ ಬಂದರು...


ಅವರು ಮೊದಲು ಕಮ್ಯುನಿಸ್ಟರಿಗಾಗಿ ಬಂದರು.
ನಾನು ಮಾತನಾಡಲಿಲ್ಲ
ಯಾಕೆಂದರೆ ನಾನು ಕಮ್ಯುನಿಸ್ಟನಾಗಿರಲಿಲ್ಲ.

ಆಮೇಲೆ ಅವರು ಯಹೂದಿಗಳಿಗಾಗಿ ಬಂದರು
ನಾನು ಮಾತನಾಡಲಿಲ್ಲ
ಯಾಕೆಂದರೆ ನಾನು ಯಹೂದಿಯಾಗಿರಲಿಲ್ಲ.

ನಂತರ ಅವರು ಕಾರ್ಮಿಕರಿಗಾಗಿ ಬಂದರು
ನಾನು ಮಾತನಾಡಲಿಲ್ಲ
ಯಾಕೆಂದರೆ ನಾನು ಕಾರ್ಮಿಕನಾಗಿರಲಿಲ್ಲ.

ಬಳಿಕ ಅವರು ಕೆಥೊಲಿಕ್ಕರಿಗಾಗಿ ಬಂದರು
ನಾನು ಮಾತನಾಡಲಿಲ್ಲ
ಯಾಕೆಂದರೆ ನಾನು ಪ್ರೊಟೆಸ್ಟೆಂಟನಾಗಿದ್ದೆ.

ಕೊನೆಗೆ ಅವರು ನನಗಾಗಿಯೇ ಬಂದರು
ಆ ಹೊತ್ತಿಗೆ ನನ್ನ ಪರ ಮಾತನಾಡಲು
ಯಾರೂ ಉಳಿದಿರಲಿಲ್ಲ.

*
ಈ ಪದ್ಯವನ್ನು ಬರೆದವನು ಜರ್ಮನಿಯ ಮಾರ್ಟಿನ್ ನೀಮ್ಯುಲರ್ (೧೮೯೨- ೧೯೮೪) ಎಂಬ ಪಾದ್ರಿ. ನಾಝಿ ದೌರ್ಜನ್ಯ ಹಾಗೂ ಯಹೂದಿ ಜನಾಂಗಹತ್ಯೆಯ ವಿರುದ್ಧ ಮಾತನಾಡಿದವನು. ಈತ ಬರೆದ ಈ ಪದ್ಯ ಈತನಿಗಿಂತ ಪ್ರಸಿದ್ಧ.

*
ಮೈಸೂರಿನಲ್ಲಿ ನನ್ನ ಒಬ್ಬ ಗೆಳೆಯನಿದ್ದಾನೆ. ಆತ ನಿನ್ನೆ ಫೋನ್ ಮಾಡಿ ಹೀಗೆ ಹೇಳಿದ :

ಅವರು ಮೊದಲು ಅಯೋಧ್ಯೆಗೆ ಬಂದರು
ನಾನು ಮಾತನಾಡಲಿಲ್ಲ
ಯಾಕೆಂದರೆ ನಾನು ಅಯೋಧ್ಯೆಯಲ್ಲಿರಲಿಲ್ಲ.

ಬಳಿಕ ಅವರು ಗುಜರಾತಿಗೆ ಬಂದರು
ನಾನು ಮಾತನಾಡಲಿಲ್ಲ
ಯಾಕೆಂದರೆ ನಾನು ಗುಜರಾತಿನಲ್ಲಿರಲಿಲ್ಲ.

ನಂತರ ಅವರು ಕರಾವಳಿಗೆ ಬಂದರು
ನಾನು ಮಾತನಾಡಲಿಲ್ಲ
ಯಾಕೆಂದರೆ ನಾನು ಕರಾವಳಿಯಲ್ಲೂ ಇರಲಿಲ್ಲ.

ಕೊನೆಗೆ ಅವರು ಮೈಸೂರಿಗೇ ಬಂದರು
ನಾನು ಈಗಲೂ ಮಾತನಾಡುವುದಿಲ್ಲ
ಯಾಕೆಂದರೆ ಅವರು ಬಂದದ್ದು ನನಗಾಗಿಯಲ್ಲ !

*
ಇತರರು ‘ಮೈಸೂರು’ ಎಂದಿದ್ದಲ್ಲಿ ತಮ್ಮ ಊರಿನ ಹೆಸರು ಸೇರಿಸಿ ಓದಿಕೊಳ್ಳಬಹುದು.

7 comments:

ಶ್ರೀನಿವಾಸಗೌಡ said...

ಅಣ್ಣಾ, ಎಂತಾ ಪದ್ಯ... ಒಂದು ಕೋಟಿ ಸಾಲಿಗೆ ಸಮ ಕಣಾ ನಿನ್ನ ಪದ್ಯ.
ಪಾಪಿಗಳು ಎಲ್ಲಿಲ್ಲಿಗೆ ಬಂದರಣ್ಮಾ ನಮ್ಮುನ್ನ ಹುಡ್ಕಂಡು...

ಹನಿ said...

Braight writeup about mysore incident.
-Hani

ಎಚ್.ಎನ್. ಈಶಕುಮಾರ್ said...

ನಿಜಕ್ಕೂ ಸರಳವಾದ ನಿಮ್ಮ ಭಾಷೆಯ ಭಾವ ಮನವನು ಕಲಕದೆ ಬಿಡದು ದನ್ಯವಾದ

ಎಚ್.ಎನ್. ಈಶಕುಮಾರ್ said...

harish nimma email id kalisi
sahayaatri.blogspot.co

Anonymous said...

Thank you Srinivas, Hani, Eeshakumar.
-Kera

Anonymous said...

ಅವರು ನಿನ್ನೆ ತಾನೇ ನಿನ್ನನ್ನು ಹುಡುಕ್ಕೊಂಡು ವಿಜಯ ಕರ್ನಾಟಕ ಕಡೆ ಬಂದಿದ್ರು ಕಣೋ!
...ನಾನು

Anonymous said...

idu lankesh prakashana-da december-18 yemba kruthi-yalli innu adbhutha-vagi tharjumegondide... kaviswara- shikaripura