ಅವರು ಆ ಪುಟ್ಟ ಬಾಲಕನ ಮುಖ ನೋಡಿದರು
ಯಾವ ಚಿಹ್ನೆಗಳೂ ಬರೆದಿರಲಿಲ್ಲ
ಕೈ ತೋಳುಗಳ ನೋಡಿದರು
ಯಾವ ಹಚ್ಚೆಯೂ ಹಾಕಿರಲಿಲ್ಲ
ಮಾತನಾಡಿಸಿದರು, ಅವನ ಭಾಷೆ ತಿಳಿಯಲು
ಅವನು ಮೂಕನಾಗಿದ್ದ
ಅವನ ನಾಲಗೆಯಲ್ಲಿ ಕಬಕಬಕಬ ಎಂಬುದಲ್ಲದೆ
ಬೇರೆ ಪದವಿರಲಿಲ್ಲ
ಕೊನೆಗೆ ಉಳಿದದ್ದು ಒಂದೇ ಉಪಾಯ
ಅವನ ಚಡ್ಡಿ ಬಿಚ್ಚಿಸಿ ನೋಡಿದರು
ಅಲ್ಲಿ ಕಂಡದ್ದು ಅಂತಿಮವೆಂಬ ಭರವಸೆ ಅವರಿಗಿರಲಿಲ್ಲ
ಚಾಕು ಚೂರಿ ಬಡಿಗೆಗಳ ಝಳಪಿಸುತ್ತ
ಅವರು ಮುಂದುವರಿದರು
ಗೊಂದಲ ಮುಗಿದಿರಲಿಲ್ಲ
7 comments:
ಹರೀಶ್,
ನಿಮ್ಮದೇ ಭಾಷೆಯಲ್ಲಿ ಹೇಳಬೇಕೆಂದರೆ touchy
excellent.
nimma koneya line nanage 'mr.& ms. aiyar' cinemada ondu seen annu jnapisithu. adarallu hage, obba hindu hudugana pant jarisi avanu muslimaa, hindhuna antha noduva ghora drushya ide.
nimma kavithe a seennaste nannannu ghasi madithu.
-Vikas Negiloni
ಧನ್ಯವಾದಗಳು.
ವಿಕಾಸ್, ‘ಮಿ...ಅಯ್ಯರ್’ನ ಆ ದೃಶ್ಯ ನನಗೆ ನೆನಪಿದೆ. ೧೯೯೨ರ ಸುಮಾರಿಗೆ ನಮ್ಮೂರಲ್ಲಿ ಕೋಮು ಗಲಭೆ ನಡೆದಾಗಲೂ ಇಂಥ ಘಟನೆ ನಡೆದದ್ದನ್ನು ಕೇಳಿ ಬಲ್ಲೆ. ಆ ಮೇಲೆ, ೨೦೦೭ರಲ್ಲಿ ಉಳ್ಳಾಲ, ಮಂಗಳೂರಿನಲ್ಲಿ ಆದದ್ದೂ ಇದೇ. ಕೋಮು ಹಿಂಸೆ ನಡೆಯುವ ಎಲ್ಲ ಊರುಗಳಲ್ಲೂ ಇಂಥ ಸನ್ನಿವೇಶಗಳು ಮರುಕಳಿಸುತ್ತಿರುತ್ತವೋ ಏನೋ.
ಇದು ಸಾದತ್ ಹಸನ್ ಮಾಂಟೋನ (ಈತ ವಿಚ್ಛಿದ್ರ ಭಾರತದ ಕಥನಕಾರ) ಕತೆಗಳಲ್ಲೂ ಮನ ಕಲಕುವಂತೆ ಇದೆ. ಈ ಬಗ್ಗೆ ಇನ್ನೊಮ್ಮೆ ವಿವರವಾಗಿ ಬರೆಯುವೆ.
- ಹರೀಶ್ ಕೇರ
ಚೆಂದದ ಬರಹ..
ಹರೀಶ್, ನಿಮ್ಮ ಈ ಪದ್ಯ ಮಿ...ಆಯ್ಯರ್' ನ ಸಿನಿಮಾದ ದೃಶ್ಯವನ್ನು ಮತ್ತೊಮ್ಮೆ ನೆನಪಿಸಿತು. good. ಹೀಗೆ ಬರೆಯುತ್ತಿರಿ. ಹಾಗೂ ನನ್ನ ಬ್ಲಾಗಿಗೆ ಬಂದು ಕಾಮೆಂಟ್ ಮಾಡಿದ್ದಕ್ಕೆ Thanks. ನನ್ನ ಉಳಿದ ಲೇಖನಗಳನ್ನು ಓದಿ ನಿಮಗಿಷ್ಟವಾಗಬಹುದು. ಹಾಗೆ ಬ್ಲಾಗಿನಲ್ಲಿ ಕಾಮೆಂಟಿಸಿ.
ಹಾಗೆ ನಿಮಗೆ ಮತ್ತೊಂದು ಆಶ್ಚರ್ಯಕ್ಕೆ:
http://camerahindhi.blogspot.com
ಶಿವು.ಕೆ.
ಅರ್ಥಪೂರ್ಣ
Post a Comment