ಈ ಕೆಳಗಿನ ಪದ್ಯಗಳನ್ನು ಬರೆದ ನಂತರ ಅನ್ನಿಸಿದ್ದು : ಇವುಗಳನ್ನು ಬರೆಯದೇ ಇದ್ದರೂ ನಡೆಯುತ್ತಿತ್ತು. ಯಾಕೆಂದರೆ ಈ ಪದ್ಯಗಳ ಅಕ್ಷರಕ್ಷರದಲ್ಲೂ ನೀಲು ಕಾಣಿಸುತ್ತಾಳೆ. ಲಂಕೇಶ್ ಕಾಣಿಸುತ್ತಾರೆ. ಡಿಲೀಟ್ ಮಾಡಲೇ ಅಂತ ಯೋಚಿಸಿದೆ. ಆಮೇಲೆ, ನನ್ನ ತಲೆಮಾರಿನ ಯಾವ ಲೇಖಕನೂ ಲಂಕೇಶರ ಪ್ರಭಾವ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಅನ್ನುವುದು ಹೊಳೆಯಿತು. ಹಾಗೆಂದೇ ಇವಕ್ಕೆ ‘ನೀಲುಗಳು’ ಅಂತ ಕರೆದಿದ್ದೇನೆ.
-೧-
ಹೂಗಳ ಮುಗ್ಧ ಚೆಲುವು
ಮತ್ತು ಎರಗಿ, ಹೀರಿ, ಸುಖಿಸುವ
ಚಿಟ್ಟೆಯ ವ್ಯಭಿಚಾರಗಳೇ
ಕಾಯಿ, ಹಣ್ಣು, ಬೀಜಗಳ ಹುಟ್ಟಿಗೆ ಕಾರಣ
-೨-
ವಿಲಾಸಿ ತರುಣಿ ಕಾಲೂರಿ
ಪಾಪ ನಿವೇದನೆ ಮಾಡಿಕೊಳ್ಳುತ್ತಿರಲು
ಮುದಿ ಸನ್ಯಾಸಿಯ
ಕಾಮವೂ ಕೆರಳುವುದು
-೩-
ಏನನ್ನೂ ಕೆರಳಿಸದ
ನಿಚ್ಚಳ ಬೆಳಕಿನ
ಜಡ ರೂಪಕ್ಕಿಂತ
ಕತ್ತಲ ಕೋಣೆಯ
ಸ್ಪರ್ಶ, ಗಂಧಗಳೇ ಜೀವಂತ
-೪-
ರಾಜ್ಯಗಳನ್ನು ಗೆಲ್ಲಲಾಗದ
ಚಕ್ರವರ್ತಿಯ ಅವಮಾನ
ಸಂಗಾತಿಯ ಹೃದಯ ಗೆಲ್ಲಲಾಗದ
ತರುಣನ ಪರಿತಾಪಕ್ಕಿಂತ
ದೊಡ್ಡದೇನಲ್ಲ
ಭಾರತದೇಶದಲ್ಲಿದ್ದ ವಿವಿಧ ಸಮುದಾಯಗಳು ಹಾಗು ಭಾರತೀಯ ಸಂಸ್ಕೃತಿ
3 months ago
10 comments:
ಖೇರಾ,
ಎಲ್ಲ ಸಾಲುಗಳು ಸೂಪರ್ ..
-ಅಲೆಮಾರಿ
ತುಂಬಾ ಚೆನ್ನಾಗಿದೆ. ನಿಮ್ಮ ಮುಂದೆ ಯಾರಾದರೂ ಮಂಡಿಯೂರಿದ್ದರೆ...?
-ಜಿ ಎನ್ ಮೋಹನ್
ಅದೆಷ್ಟು ಜನರ ಮನದಲ್ಲಿ ನೀಲು ಪ್ರತಿರೂಪ ಪಡೆಯುತ್ತಾಳೋ! ಸೂಪರ್.. ಲಂಕೇಶರ ನೀಲುನ ಪ್ರತಿಸೃಷ್ಠಿಸಿದ್ದಕ್ಕೆ ಧನ್ಯವಾದಗಳು.
- ಮಂಜುನಾಥಸ್ವಾಮಿ
nice
ವ್ಹಾ.. ಚೆಂದದ ನೀಲುಗಳು.
ಸೊಗಸಾಗಿವೆ. ಅಭಿನಂದನೆಗಳು.
ಉತ್ತಮ ಪ್ರಯತ್ನ ಹೀಗೇ ಮುಂದುವರೆಯಲಿ.
ಅದೇ ಕಾತುರ, ಕಾಮ, ಕುತೂಹಲದೊಂದಿಗೆ.
-ಚಂದಿನ
ಹರೀಶರೆ,
ನೀಲುಗಳು ಸೊಗಸಾಗಿವೆ. ಹೀಗೇ ಬರೆಯುತ್ತಿರಿ.
ಸುಮಾರು ಒಂದು ವರ್ಷದ ಕೆಳಗೆ "ನೀಲು ಕಾವ್ಯ" ಹೊರಬಿದ್ದಾಗ ಉದ್ವೇಗ ತುಂಬಿದ ಖುಷಿಯಿಂದ ತರಿಸಿಕೊಂಡು ಓದಿದ್ದೆ. ಅದೇ ಸ್ವಲ್ಪ ಮುಂಚೆ ಕೇಶವರ ಬ್ಲಾಗಿನಲ್ಲಿ "ನೀಲುಗಳು" ಎಂದು ಕರೆಯುವುದರ ಬಗ್ಗೆ ಪ್ರಸ್ತಾಪಿಸಿದ್ದರು. ಆಗಿನಿಂದಲೂ, "ನೀಲುಗಳು" ಎಂದುಕೊಂಡು ಬರೆಯುತ್ತಿದ್ದೇನೆ. ಆದಾಗ ಓದಿ ಎಂದು ಲಿಂಕು ಕೊಡುತ್ತಿದ್ದೇನೆ
ನೀಲು ಕಾವ್ಯದ ಬಗ್ಗೆ- http://anivaasi.wordpress.com/2007/06/26/ಲಂಕೇಶ್-ಬ್ಲಾಗ್-ನೀಲು-ಕಾವ್ಯ/
ಹಾಗೆಯೇ ನನ್ನ ನೀಲುಗಳು ಇಲ್ಲಿವೆ :)
http://kn.wordpress.com/tag/ನೀಲುಗಳು
ನಿಮ್ಮಿಂದ ಹೆಚ್ಚೆಚ್ಚು ನೀಲುಗಳನ್ನು ನಿರೀಕ್ಷಿಸುತ್ತಾ
Friends, There are so many good lyrics like Neelu in Blogs. Read them also. You will be delighted beyond your expectations.
hats off!
Post a Comment