‘ಹೆಂಡ, ಹೆಣ್ಣು , ತಣ್ಣೆಳಲು, ರೊಟ್ಟಿಯ ತುಂಡು- ನನಗಿಷ್ಟು ಸಾಕು’ ಎಂದ ಕವಿ, ದಾರ್ಶನಿಕ ಉಮರ್ ಖಯ್ಯಾಮ್ ಇದೀಗ ಪಡಖಾನೆಯಲ್ಲಿ ಮಧು ಹೀರಿ ಉನ್ಮತ್ತ. ಜೀವೋತ್ಸಾಹ ತುಂಬಿದ ಒಂದಿಷ್ಟು ಹುಡುಗ- ಹುಡುಗಿಯರ ನರ್ತನ ಅವನ ಸುತ್ತ.
ಯಾರೋ ಎಚ್ಚರಿಸಿದರು : ‘ಏಳಯ್ಯ ಖಯ್ಯಾಮ್, ಸಂಸ್ಕೃತಿಯ ರಕ್ಷಕರು ಬರುತ್ತಿದ್ದಾರೆ. ಈ ತರುಣಿಯರು, ಅವರ ಕುಡಿತ, ಜತೆಗೆ ನೀನು ! ಅವರು ಒಂದಿಷ್ಟೂ ಸಹಿಸುವುದಿಲ್ಲ !’
ಖಯ್ಯಾಮ್ ಕಡೆಗಣ್ಣಿನಿಂದ ನೋಡಿ ಕುಡಿತ ಮುಂದುವರಿಸಿದ.
ಕೊಂಚ ಹೊತ್ತಿನಲ್ಲೇ ಹೊರಗೆ ಗದ್ದಲ ಜೋರು ಜೋರಾಗತೊಡಗಿತು. ಜತೆಗಿದ್ದ ತರುಣರು ಓಡುತ್ತಾ ಕೂಗಿದರು- ‘ಖಯ್ಯಾಮ್, ಓಡಿ ಜೀವ ಉಳಿಸಿಕೋ. ಅವರು ಬಂದೇ ಬಿಟ್ಟರು. ಇಲ್ಲೇ ಇದ್ದರೆ ದುರಂತ ಖಂಡಿತ’
ಖಯ್ಯಾಮ್ ಕಡೆಗಣ್ಣು ತೆರೆದು ಹೇಳಿದ : "ಮೂರ್ಖರೇ ! ದುರಂತ ಎಂದೋ ಆರಂಭವಾಗಿದೆ. ಚಲಿಸುತ್ತಿದೆ. ಅದು ಶುರುವಾದಾಗ ನೀವೆಲ್ಲ ನಿದ್ರಿಸುತ್ತಿದ್ದಿರಿ ! ಈಗ ಅದನ್ನು ನೀವಾದರೂ ಹೇಗೆ ತಡೆಯಬಲ್ಲಿರಿ ?!"
ಅಷ್ಟು ಹೇಳಿ ಮತ್ತೆ ಮತ್ತೊಂದು ಬಾಟಲಿ ಬಿರಡೆ ಬಿಚ್ಚಿದ.
6 comments:
Excellent interpretation to Mangalore incident.
-srinidhi
ತುಂಬ ಸಮಯದಿಂದ ನಿಮ್ಮ ಬರಹ ಕಾಯುತ್ತಿದ್ದೆ. ಮಂಗಳೂರಿನ ಘಟನೆ ಬಗ್ಗೆ ತುಂಬ ಮಾತು ನಡೆದಿದೆ. ಬಟ್, ನಿಮ್ಮ ಪ್ರತಿಸ್ಪಂದನ ಇಷ್ಟವಾಯಿತು. ಸ್ವಲ್ಪ ಹೆಚ್ಚಾದರೆ ತುಂಬ ಹೆಚ್ಚಾದ ಹಾಗೆ, ಸ್ವಲ್ಪ ಕಡಿಮೆಯಾದರೆ ತುಂಬ ಕಡಿಮೆಯಾದ ಹಾಗೆ!
ಬರೆಯುತ್ತಿರಿ ಹರೀಶ್.
Tumba chennagide...ista aitu
೧೩ ಸಾಲಿನಲ್ಲಿ ಎಲ್ಲವನ್ನೂ ವಿವರಿಸಿ ಬಿಟ್ಟಿದ್ದೀರಿ. ಆ ೧೩ ಗಳಿಗೆಯ ಸಂಗತಿಗಳೆಲ್ಲವೂ ಅಸಂಗತವಾಗಿದೆ.
- ಮಹೇಶ್ ಪುಚ್ಚಪ್ಪಾಡಿ
yakri, thumba kayisteeri? bega bega post madakkagalva?
ಧನ್ಯವಾದಗಳು ಪೈ, ಶ್ರೀನಿ, ಕಾರ್ತಿಕ್, ಮಹೇಶ್.
ವಾಸ್ತವ ಕೆಲವೊಮ್ಮೆ ಎಷ್ಟು ನಿರಾಶಾದಾಯಕವಾಗಿರುತ್ತದೆ ! ವಿಮರ್ಶೆ, ಲೇಖನಗಳು ಸೋಲುತ್ತವೆ.
ಕತೆ, ಕವಿತೆ ಕೂಡ.
ಆದರೂ ಒಂದು ಪ್ರಯತ್ನ.
Post a Comment