ಸಂಜೆ. ಸಣ್ಣ ಗುಡುಗು. ಮಳೆ ಹೊಯ್ಯುವಂತಿದೆ.
ದನಿ ಮಾಡದೆ ಧಾವಿಸುವ ಮೆಲ್ಲನೆ ಗುಡ್ಡದ ತುದಿಗೆ
ಇದೊ ಈ ಮರದ ಬುಡದಲ್ಲಿ ಕುಳ್ಳಿರುವ.
ನಿನಗೊಂದು ಅಚ್ಚರಿ ತೋರಿಸಬೇಕು ಈಗ.
ದನಿ ಮಾಡದೆ ಧಾವಿಸುವ ಮೆಲ್ಲನೆ ಗುಡ್ಡದ ತುದಿಗೆ
ಇದೊ ಈ ಮರದ ಬುಡದಲ್ಲಿ ಕುಳ್ಳಿರುವ.
ನಿನಗೊಂದು ಅಚ್ಚರಿ ತೋರಿಸಬೇಕು ಈಗ.
ಸಣ್ಣಗೆ ಮಳೆ ಹನಿಯುತ್ತಿದೆಯ
ಈ ಗುಡ್ಡದ ಬುಡದ ಪೊದರುಗಳೊಳಗಿಂದ
ಮೈ ನಡುಗಿಸುವ ಕೇಕೆ ಕೇಳುತ್ತಿದೆಯ
ರೆಕ್ಕೆ ಕೊಡವುತ್ತ ಹೆಣ್ಣು ನವಿಲೊಂದು
ಹೊರಬಂದಿದೆಯ
ಹೆಣ್ಣ ಬೆನ್ನಟ್ಟಿ ಒಂದು ಗಂಡು ನವಿಲು ತನ್ನ
ಸಾವಿರ ಕಣ್ಣುಗಳ ದಿಟ್ಟಿ ಹೆಣ್ಣ ಮೇಲೇ
ನೆಟ್ಟು
ಅಹಹ ! ಒಂದು ಹೆಣ್ಣು
ನೂರು ಕಣ್ಣು
ನೋಡಿ
ಕೇಳಿ
ಕೇಳಿ
ಮುಸ್ಸಂಜೆ. ಮಳೆ ಇನ್ನೂ ಜೋರಾಗಿ ಸುರಿಯುತ್ತಿದೆ.
ಕೊಂಚ ಹತ್ತಿರ ಬಾ.
ನಿನ್ನೊಡನೆ ಏನೋ ಹೇಳಬೇಕು.
ಅಥವಾ
ಹೇಳದಿದ್ದರೂ ನಡೆಯುತ್ತದೆ.
5 comments:
olle kavithe. chennagide.
- Preethi.s.
ಅಹಹ..ಎಂತಾ ಸಾಲು, ಎಂತಾ ಮಳೆ! ಮೆಚ್ಚಿದೆ , ಮೆಚ್ಚಿದೆ
- ನವಿಲು
ಏನ್ರಿ ಹರೀಶ್ ಇಂಥ ಬಿಸಿಲುಗಾಲದಲ್ಲೂ ಒಳ್ಳೆ ರೊಮ್ಯಾಂಟಿಕ್ ಕವನ...?
ನಿಮ್ಮ ಬ್ಲಾಗ್ ನೋಡಿದ್ದೇ ತಡ ಕರಾವಳಿಯಲ್ಲಿ ಬರೋಬ್ಬರಿ ಮಳೆ. ಏನು ವಿಚಿತ್ರ. ನಾವೂ ಬ್ಲಾಗಿಂಗ್ ಆರಂಭಿಸಿದ್ದೇವೆ. ಒಮ್ಮೆ ನೋಡಿ, ಅಭಿಪ್ರಾಯ ತಿಳಿಸಿ www.mschsnirchal.blogspot.com
ನಿನ್ನೊಡನೆ ಏನೋ ಹೇಳಬೇಕು.
ಅಥವಾ
ಹೇಳದಿದ್ದರೂ ನಡೆಯುತ್ತದೆ.
Ahahaa, entha tunTa saalugaLu.
- ravi mavakhanda
Post a Comment