ತಲವಾರು, ಲಾಠಿಗಳ ಮೇಲಿದ್ದ ರಕ್ತದ ಕಲೆಗಳನ್ನು ತೊಳೆದುಕೊಳ್ಳುತ್ತ ಅವರು ಮಾತಾಡುತ್ತಿದ್ದರು :
"ನಮ್ಮ ಕೆಲಸ ಸುಲಭವಾದದ್ದು ಟೆಲಿಕಾಂ ಅಕಾರಿಯಿಂದಾಗಿ. ಅವರು ಆ ಕೇರಿಯ ಅಷ್ಟೂ ಫೋನ್ ಸಂಪರ್ಕಗಳಿಗೆ ಕನೆಕ್ಷನ್ ತಪ್ಪಿಸಿದ್ದರು"
"ಆದರೆ ವಿದ್ಯುತ್ ಇಲಾಖೆಯ ಸಚಿವರು ನೆರವಾಗದಿದ್ದರೆ ಇದೆಲ್ಲಾ ನಡೆಯುತ್ತಿರಲಿಲ್ಲ. ಅವರು ನೋಡಿ, ನಮ್ಮ ಕೆಲಸ ಮುಗಿಯುವವರೆಗೂ ಇಡೀ ಗಲ್ಲಿಗೆ ಕರೆಂಟ್ ಬಾರದಂತೆ ನೋಡಿಕೊಂಡರು"
"ಊಹೂಂ, ಇದೆಲ್ಲಾ ಗೃಹ ಸಚಿವರ ಕೃಪೆ. ನಾವು ಎಲ್ಲಾ ಮುಗಿಸಿ ಬಂದರೂ ಇನ್ನೂ ಅಲ್ಲಿಗೆ ಪೊಲೀಸರು ಕಾಲಿಟ್ಟಿಲ್ಲ ನೋಡಿ"
"ಮೂರ್ಖರೇ" ತಂಡದ ಮುಖಂಡ ಗದರಿಸಿದ ; "ನಿಮಗೆಲ್ಲ ಇನ್ನೂ ಅರ್ಥವಾಗಿಲ್ಲ. ಅವರೆಲ್ಲಾ ನಮ್ಮ ಬಾಸ್‌ನ ಮಾತನ್ನು ಪಾಲಿಸಿದರು ಅಷ್ಟೇ !"
"ಯಾರವರು ?"
"ನಮ್ಮ ಮುಖ್ಯಮಂತ್ರಿಗಳು"
ಮನದೊಳಗಣ ಕಿಚ್ಚು ಮನವ ಸುಡುವುದು
1 month ago
1 comment:
ವಾಸ್ತವ ಹರೀಶ್. ಗುಜರಾತ್ ನೆನಪಾಗುತ್ತಿದೆ. ಅಷ್ಟೇ ಏಕೆ, ಕರ್ನಾಟಕದ ಇತ್ತೀಚಿನ ಹಲವಾರು ಪ್ರಸಂಗಗಳೂ ಕಣ್ಮುಂದೆ ಸುಳಿಯುತ್ತವೆ.
ವಾಸ್ತವಿಕ ಹಾಗೂ ಮೌಲಿಕ ಬರವಣಿಗೆ. ಪುಟ್ಟದಾಗಿದ್ದರಿಂದ ಪ್ರಭಾವವೂ ದಟ್ಟ.
- ಚಾಮರಾಜ ಸವಡಿ
Post a Comment