ಮೂಲಭೂತವಾದಿಗಳ ಪ್ರತಿರೋಧವನ್ನೂ, ಗಂಡಸರ ಅಸಹನೆಯನ್ನೂ ಬೆನ್ನಿಗಿಟ್ಟುಕೊಂಡು ತಸ್ಲಿಮಾ ನಸ್ರೀನ್ ಎಂಬ ಹುಡುಗಿ ದೇಶದಿಂದ ದೇಶಕ್ಕೆ ಅಲೆಯುತ್ತಲೇ ಇದ್ದಾಳೆ. ಬೆನ್ನಟ್ಟುತ್ತಿರುವ ಬೇಟೆ ನಾಯಿಗಳ ಕಾರಣ ಆಕೆಯ ಧೈರ್‍ಯವೂ ಕೊಂಚ ಉಡುಗಿದಂತಿದೆ. ಆದರೆ ಅಷ್ಟು ಸುಲಭಕ್ಕೆಲ್ಲಾ ತನ್ನೊಳಗಿನ ಬೆಂಕಿಯನ್ನು ಆರಲು ಬಿಡದ ತಸ್ಲಿಮಾ ಆತ್ಮಚರಿತ್ರೆ ಬರೆದು ಬಾಂಗ್ಲಾದ ಮುಸ್ಲಿಮರನ್ನು ಇನ್ನಷ್ಟು ಚಚ್ಚಲು ಹವಣಿಸುತ್ತಿದ್ದಾಳೆ. ಈಕೆಯ ಧೈರ್‍ಯಕ್ಕೆ ಒಂದು ನಮಸ್ಕಾರ ಸಲ್ಲಿಸುತ್ತ, ಈಕೆ ಬರೆದ ಒಂದು ಪುಟ್ಟ ಪದ್ಯವನ್ನು ಅನುವಾದಿಸಿ ಕೊಟ್ಟಿದ್ದೇನೆ. ಇದು ಆಕೆಯ ಒಳ್ಳೆಯ ಪದ್ಯವಲ್ಲ, ಪ್ರಾತಿನಿಕವೂ ಅಲ್ಲ. ಆದರೆ, ಆಕೆ ಗಂಡಸರಿಂದ ಪದೇ ಪದೇ ಏಟು ತಿನ್ನಲು ಏನು ಕಾರಣ ಎಂಬುದು ಈ ಪದ್ಯದಿಂದ ಸ್ವಲ್ಪ ಮಟ್ಟಿಗೆ ಗೊತ್ತಾಗುವಂತಿದೆ !
ಹಸ್ತಮೈಥುನ
(ಗಂಡಿಲ್ಲದ ಹೆಣ್ಣು ಸೈಕಲಿಲ್ಲದ ಮೀನು !)
ಗಂಡಿಲ್ಲದೆ ಹೆಣ್ಣು ಉಳಿಯಲಾರಳೆ ?
ಹ್ಹ , ಎಂಥ ತರ್ಕ, ಭೂತದ ಮಾತು !
ಎಸೆದುಬಿಡು ಚೆಂಡು
ಆರ್ಕಿಡ್‌ಗಳು ನಿನ್ನ ತಬ್ಬಲು ಎಂದಿಗೂ ಬಿಡದಿರು
ವಿಷ ತುಂಬಿದ ಇರುವೆಗಳೆಡೆ ಹೋಗದಿರು
ಮೈಮನದಲ್ಲಿ ಉದ್ರೇಕ ತುಂಬಿಕೋ
ನಿನ್ನಲ್ಲಿ ಬಿಲ್ಲಿದೆ, ಬಾಣವೂ ಇದೆ
ಬಾ ಹುಡುಗಿ, ಹಸ್ತಮೈಥುನ ಮಾಡಿಕೊ !
ನೋಟ್ ಬುಕ್ಕಿನ ಕಡೆಯ ಪುಟ.....ಜಯಶ್ರೀ ದೇಶಪಾಂಡೆ
1 week ago
1 comment:
chi chi !
- Govinda Bhatta
Post a Comment